ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ
ವಿಭೂತಿಪುರ, ಬೆಂಗಳೂರು-560037
ಶ್ರೀಮಠದ ಪಟ್ಟಾಧ್ಯಕ್ಷರಾದ ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಠದ ಸಾರಥ್ಯವನ್ನು ವಹಿಸಿ  ಹನ್ನೆರಡು ವರ್ಷ ಪೂರೈಸಿದ ಪ್ರಯುಕ್ತ ದಿನಾಂಕ: 9 ಮತ್ತು 10ನೆ ಡಿಸೆಂಬರ್ 2012ರಂದು ಹಮ್ಮುಕೊಳ್ಳಲಾಗಿರುವ 'ಸಾಧನೋತ್ಸವ' ದ
ಪೂರ್ವ ಪ್ರಕಟಣೆ
ಮಾನ್ಯರೆ,
ಈ ಮೂಲಕ ತಮಗೆ ಮನವಿ ಮಾಡಿಕೊಳ್ಳುವುದೇನೆಂದರೆ ಕನರ್ಾಟಕ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಇರುವ ಸುಮಾರು 64 ವೀರಶೈವ ಮಠಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡ  ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠವು ಹೋಯ್ಸಳ ರಾಜ ವೀರಬಲ್ಲಾಳನಿಂದ ಕ್ರಿ.ಶ. 1186ರಲ್ಲಿ ಸ್ಥಾಪಿಸಿದ ಶ್ರೀಮದ್ ರಂಭಾಪುರೀ ಪೀಠದ ಶಾಖಾ ಮಠವಾಗಿದೆ. ಶ್ರೀಮಠದ ಗುರು ಪರಂಪರೆಯಲ್ಲಿ ಈಗಾಗಲೇ 85 ಜನ ಪೂಜ್ಯರು ತಮ್ಮ ತಮ್ಮ ಅವಧಿಯಲ್ಲಿ ತಪಶ್ಶಕ್ತಿಯಿಂದ ಕ್ರೀಯಾಶೀಲರಾಗಿ ಶ್ರೀಮಠಕ್ಕೆ ಚೈತನ್ಯವನ್ನು ನೀಡಿದ್ದಾರೆ. ವೀರತಪಸ್ವೀ, ಮಾನವಧರ್ಮದ ಹರಿಕಾರ, ಮಹಾಶಿವಪೂಜಾಲೋಲ ಹಾಗೂ ಪಂಚಪೀಠಗಳಗೆ ಹೊಸ ಚೈತನ್ಯವನ್ನು ನೀಡಿದ ಶ್ರೀಮದ್ ರಂಭಾಪುರೀ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೂವರ್ಾಶ್ರಯದಲ್ಲಿ ಶ್ರೀಮಠದ ಪಟ್ಟಾಧಿಕಾರಿಗಳಾಗಿ ಶ್ರೀಮಠಕ್ಕೆ ಅಧ್ಯಾತ್ಮಿಕಶಕ್ತಿಯನ್ನು ನೆಲೆಗೊಳಿಸಿರುವುದು ಶ್ರೀಮಠದ ಇತಿಹಾಸದ ಸುವರ್ಣಪುಟ. ನಂತರದ ಶಿವಾದ್ವೈತ ವಿದ್ವಾನ್ ಘನಲಿಂಗಚರಚಕ್ರವತರ್ಿ ಲಿಂ|| ಸುವರ್ಣಲಿಂಗ ಶಿವಾಚಾರ್ಯ ಸ್ವಾಮಿಗಳು ಹೋರಾಟಮಯ ಜೀವನವನ್ನು ಸವೆಸಿ ಶ್ರೀಮಠದ ಅಸ್ತಿತ್ವಕ್ಕೆ ಕಾರಣೀಭೂತರಾಗಿದ್ದರಲ್ಲದೆ ತಮ್ಮ ವಿದ್ವತ್ತಿನ ಪ್ರಭಾವದಿಂದ ನಾಡಿನಾದ್ಯಂತ ವೀರಶೈವ ಸಮನ್ವಯ ತತ್ತ್ವಗಳನ್ನು ಜನಮನದಲ್ಲಿ ಶಾಶ್ವತವಾಗಿ ನೆಲಗೊಳಿಸಿ ಶ್ರೀಮಠದ ಕೀತರ್ಿ ಗೌರವವನ್ನು ವೃದ್ಧಿಸಿದ್ದಾರೆ.
ಲಿಂಗೈಕ್ಯ ಪೂಜ್ಯರ ಸಂಪೂರ್ಣ ಕೃಪಾನುಗೃಹಕ್ಕೆ ಪಾತ್ರರಾಗಿ ಅವರಿಂದ ದಿನಾಂಕ: 03-03-1996ರಂದು ಶ್ರೀಮಠದ ಗುರುತ್ವವನ್ನು ಸ್ವೀಕರಿಸಿದ ಪೂಜ್ಯ ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರು ತಮಗೆಲ್ಲರಿಗೂ ಅತ್ಯಂತ ಚಿರಪರಿಚಿತರು. ಪೂಜ್ಯರು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿಯೂ ಆರಂಭದಿಂದ ವಿಶ್ವವಿದ್ಯಾಲಯದ ವ್ಯಾಸಂಗದ ವರೆಗೂ ಅತ್ಯುನ್ನತ ಶ್ರೇಣಿಯಲ್ಲಿ ಯಶಸ್ಸನ್ನು ಹೊಂದಿ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಒಟ್ಟೂ ಮೂರು ಸುವರ್ಣ ಪದಕಗಳನ್ನು ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿಯಂದೇ ಹೇಳಬಹುದು. 2001ರಲ್ಲಿ ಪೂಜ್ಯ ಸುವರ್ಣಲಿಂಗ ಶಿವಾಚಾರ್ಯರು ಲಿಂಗೈಕ್ಯರಾದ ನಂತರ ಶ್ರೀಮಠದ ಸಂಪೂರ್ಣ ಸಾರಥ್ಯವನ್ನು ವಹಿಸಿಕೊಂಡು ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ಮಧ್ಯೆಯೂ ಅಧ್ಯಯನ ಶೀಲರಾಗಿ 'ಶೈವಾಗಮಗಳು ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ' ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಅವರ ಆತ್ಮೀಯರಾದ ತಮಗೆಲ್ಲಾ ತಿಳಿದ ವಿಷಯ. ಪೂಜ್ಯರು ತಮ್ಮ ಅಧಿಕಾರವನ್ನು ತಮ್ಮ ಶ್ರೀಮಠದ  ತಮ್ಮ ಅಪಾರವಾದ ಜ್ಞಾನ ಹಾಗೂ ಕ್ರೀಯಾಶಕ್ತಿಗಳ ಬಲದಿಂದ ಈ ದೇಶ ಮಾತ್ರವಲ್ಲದೇ ಆಷ್ಟ್ರೇಲಿಯಾ, ನ್ಯೂಜಿಲ್ಯಾಂಡ್, ರಸ್ಸಿಯಾ, ಸಿಂಗಾಪೂರ ಮುಂತಾದ ದೇಶಗಳಲ್ಲಿ ವೀರಶೈವ ಸಿದ್ಧಾಂತದ ಬೆಳಕನ್ನು ಪಸರಿಸಿದ್ದಾರೆ. ಪೂಜ್ಯರ ಸಾರಥ್ಯದಿಂದ ಶ್ರೀಮದ್ ವಿಭೂತಿಪುರಮಠವು ಹೊಸ ಶಕ್ತಿಯನ್ನು ಪಡೆದುಕೊಂಡಿದೆ. ಅವರ ಅಪಾರವಾದ ತ್ಯಾಗ ಹಾಗೂ ಪರಿಶ್ರಮದ ಫಲವಾಗಿ ಇಂದು ಶ್ರೀಮಠದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸ್ಮೃತಿ(ಬೃಹತ್ ಕಲ್ಯಾಣ ಮಂಟಪ), ಸುಮಾರ ಐದುನೂರು ಬಡ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಉಚಿತ ಊಟ ವಸತಿಯ ಜೊತೆಗೆ ಉನ್ನತ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಉಚಿತ ವಸತಿ ಶಾಲೆ, ನವೀಕೃತಗೊಂಡ ಶ್ರೀ ವೀರಭದ್ರಸ್ವಾಮಿ ದೇವಾಲಯ, ಶ್ರೀಮಠದ ಧಾಮರ್ಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಿರುವ 'ಸಂತೃಪ್ತಿ ಸದನ', ನವೀಕೃತಗೊಂಡ ಶ್ರೀಮಠದ ಪ್ರಾಂಗಣ, ಶ್ರೀಮಠದಲ್ಲಿ 'ಗುರು ಸದನ', 'ಅತಿಥಿ ಸದನ', ಶಿವಯೋಗ ಸದನ', ಶ್ರೀಮಠದ ಪರಿಸರದಲ್ಲಿ ವಸತಿ ವಾಣಿಜ್ಯ ಸಂಕೀರ್ಣಗಳು ಹಾಗೂ ಶೈಕ್ಷಣಿಕವಾಗಿ ವೇದ, ಸಂಸ್ಕೃತದ ಜೊತೆಗೆ ಕೈಗಾರಿಕಾ ತರಬೇತಿ ಕೇಂದ್ರಗಳು ನಿಮರ್ಾಣವಾಗಿದ್ದು ಇವೆಲ್ಲದರ ಜೊತೆಗೆ ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಸುಮಾರು 12.5 ಎಕರೆ ಜಮೀನು ಶ್ರೀಮಠಕ್ಕೆ ಕರೀದಿಸಿರುವುದು ಅವರ ಕ್ರೀಯಾಶಕ್ತಿಯ ಪ್ರತೀಕಗಳಾಗಿವೆ.
ಶ್ರೀಮಠಕ್ಕೆ ಹೊಸ ಶಕ್ತಿಯಾಗಿ ಬಂದಿರುವ ಪೂಜ್ಯರ ಬಲದಿಂದ ಶ್ರೀ ವಿಭೂತಿಪುರ ಮಠವು ತನ್ನ ಗತವೈಭವವನ್ನು ಮರಳಿ ಪಡೆದುಕೊಂಡಿದೆ. ಅಪಾರ ವಾಗ್ಮಿಗಳಾಗಿ ನಾಡಿನದ್ಯಂತ ಸರ್ವಜನತೆಯ ಪ್ರೀತಿ ಗೌರವಗಳಿಗೆ ಪಾತ್ರರಾಗಿ ಸ್ವಾಮಿಜಿಗಳ ಬಳಗದಲ್ಲಿ ತಮ್ಮದೆ ಆದ ವಿಶಿಷ್ಟ ಸ್ಥಾನ ಗಳಿಸಿದವರಾಗಿದ್ದಾರೆ. ವೀರಶೈವ ಧರ್ಮದ ಜ್ಞಾನದ ಬೆಳಕನ್ನು 'ಮನೆ ಮನಗಳಲ್ಲಿ ಶಿವಪೂಜೆ ಶಿವಾನುಭವ' ಮುಂತಾದ ಕರ್ಯಗಳಿಂದ ಎಲ್ಲರ ಮನದಂಗಳಕ್ಕೆ ನೀಡಿದ ಅವರ ವಿದ್ವತ್ಪೂರ್ಣವಾದ ವ್ಯಕ್ತಿತ್ತ್ವವನ್ನು ನಾವು ಎಷ್ಟು ಸ್ತುತಿಸಿದರೂ ಕಡಿಮೆ ಎನ್ನಬಹುದು. ನಮ್ಮ ಪೂಜ್ಯರ ಆತ್ಮೀಯರಾದ ತಾವುಗಳು ಅವರ ವ್ಯಕ್ತಿತ್ವವನ್ನು ಕಂಡು ಅವರನ್ನು ಅನೇಕ ಬಾರಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ಆಹ್ವಾನಿಸಿ ಗೌರವಿಸಿ ಪ್ರೋತ್ಸಾಹಿಸಿದ್ದೀರಿ.
ಪ್ರಸ್ತುತ ಪೂಜ್ಯರು ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿ ಈಗಾಗಲೇ ಹದಿನಾರು ವರ್ಷ ಕಳೆದರೂ ಮಠದ  ಸಾರಥ್ಯವನ್ನು ವಹಿಸಿ 2012ಕ್ಕೆ ಹನ್ನೆರಡು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರ ಸಾಧನೆ ಹಾಗೂ ವ್ಯಕ್ತಿತ್ತ್ವವನ್ನು ಗೌರವಿಸಬೇಕೆಂದ ಭಾವನೆಯಿಂದ ಶ್ರೀಮಠದ ಸಕಲ ಭಕ್ತ ಮತ್ತು ಅಭಿಮಾನಿಗಳಾದ ನಾವುಗಳೆಲ್ಲಾ ಸೇರಿ ಇದೇ ದಿನಾಂಕ: 9 ಮತ್ತು 10ನೇ ಡಿಸೆಂಬರ್ 2012ರ ಎರಡುದಿನಗಳಂದು 'ಸಾಧನೋತ್ಸವ' ವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವು ಜಗದ್ಗುರು ಪಂಚಪೀಠಾದೀಶ್ವರ ಸಾನಿಧ್ಯದಲ್ಲಿ ಮತ್ತು ಸಿದ್ದಗಂಗಾ ಹಾಗೂ ಸುತ್ತೂರು ಸ್ವಾಮಿಜಿಗಳವರ ಸಮ್ಮುಖದಲ್ಲಿ ನಡೆಯುತ್ತದೆ. 200ಕೂ ಹೆಚ್ಚು ಜನ ಮಠಾಧಿಪತಿಗಪಳ ಉಪಸ್ಥಿತಿಯಲ್ಲಿ ವಿಶ್ವ ಹಿಂದು ಪರಿಷತ್ನ ಮುಖ್ಯಸ್ಥರಾದ ಅಶೋಕ ಸಿಂಘಾಲ್, ರಾಜ್ಯದ ಮುಖ್ಯಮಂತ್ರಿಗಳನ್ನು ಮೊದಲು ಮಾಡಿಕೊಂಡು ಎಲ್ಲ ರಾಜಕೀಯ ಗಣ್ಯರು, ಸಾಹಿತಿ ಕಲಾ ಬಳಗದವರು ಮುಖ್ಯವಾಗಿ ಅಂತರಾಷ್ಟ್ರೀಯ ಖ್ಯಾತಿಯ ಕದ್ರಿ ಗೋಪಾಲನ್ ಅವರ ಸಂಗೀತ ಕಾರ್ಯಕ್ರಮ ಹಾಗೂ ಇತರೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವ ಈ ಸಂದರ್ಭದಲ್ಲಿ ಪ್ರತಿವರ್ಷದ ಪದ್ದತಿಯಂತೆ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ 'ಜ್ಞಾನಪೀಠ ಪ್ರಶಸ್ತಿ' ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರರವರಿಗೆ  'ಸುವರ್ಣಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭವೂ ನೆರವೇರುವುದು. ಪ್ರಶಸ್ತಿಯು ರೂ.2,5000/-. ನಗದು ಮತ್ತು ಕಂಚಿನ ಪ್ರಶಸ್ತಿ ಪತ್ರನ್ನು ಹೊಂದಿರುತ್ತದೆ.
ಈ ಸಮಾರಂಭದಲ್ಲಿ ನೂತನವಾಗಿ ನಿಮರ್ಾಣಗೊಂಡಿರುವ ಉಚಿತ ವಸತಿ ಶಾಲೆ, ಸದನತ್ರಯಗಳು, ನವೀಕರಣಗೊಂಡ ದೇವಾಲಯ, ನವೀಕರಣಗೊಂಡ ಶ್ರೀಮಠದ ಪ್ರಾಂಗಣ ಉದ್ಘಾಟನೆ, ಶ್ರೀಗಳ ಪಿಎಹ್.ಡಿ. ಸಂಶೊಧನಾ ಗ್ರಂಥ, ಡಾ. ಎಂ. ಶಿವಕುಮಾರಸ್ವಾಮಿಗಳ ಆಂಗ್ಲ ಭಾಷೆಯಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಭೂಮಿಕೆ ಗ್ರಂಥ, ಶ್ರೀಮಠದ ಪರಿಚಯ ಗ್ರಂಥ, ಶ್ರೀಗಳ ಸಚಿತ್ರ ಪರಿಚಯ ಗ್ರಂಥ ಮುಂತಾದ ಗ್ರಂಥಗಳು ಲೋಕಾರ್ಪಣೆಗೊಳ್ಳಲಿವೆ.
ಶ್ರೀಮಠದ ಅಭಿಮಾನಿಗಳಾದ ತಾವುಗಳು ಈ ಎಲ್ಲಾ ಕಾರ್ಯಗಳಲ್ಲಿ ತನು ಮನ ಧನ ಸೇವೆ ಸಲ್ಲಿಸಿ ದಯಮಾಡಿಸಿದ ಎಲ್ಲ ಜಗದ್ಗುರುಗಳ ಮತ್ತು ಮಹಾಪೂಜ್ಯರ ದರ್ಶನಾಶೀವರ್ಾದ ಪಡೆದು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯ ಹಾಗೂ ಮಠದ ಪೂಜ್ಯರ ಕೃಪಾಶಿವರ್ಾದಕ್ಕೆ ಪಾರ್ತರಗಲು ಈ ಮೂಲಕ ಕೋರಲಾಗಿದೆ. 
ಸಾಧನೋತ್ಸವ ಸಮಿತಿ ಮತ್ತು ಶ್ರೀಮಠದ ಸಕಲ ಸದ್ಭಕ್ತ ಮಂಡಳಿ
080252372324, 9448689269, 9448077234, 9844361993

In Vibhuthipuramath on every Amavasya(New Moonl Day) evening ‘Dharma Chintana’ will be held at 5.30pm. ‘Dharma Chintana’ is a religious function with Bhajan, a lecture on contemporary subjects. In the end, Shri Swamiji gives His Discourse.

Flash News

ಶ್ರೀ ಷ. ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧಿಕಾರ ರಜತ ಮಹೋತ್ಸವ. ಶ್ರೀ ಪಟ್ಟೀಕಂಥಿ ಹಿರೇಮಠ, ಮನಗೂಳಿ

ಶ್ರೀ ಷ. ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಾಧಿಕಾರ ರಜತ ಮಹೋತ್ಸವ.

ಶ್ರೀ ಪಟ್ಟೀಕಂಥಿ ಹಿರೇಮಠ, ಮನಗೂಳಿ

ದಿನಾಂಕ 24,25 ಮತ್ತು 26-04-2017


Share it with your Friends
Thanks...

Login Form

Who's Online

We have 10 guests and no members online