ಪರಮಪೂಜ್ಯ ಶ್ರೀ ಷ|| ಬ್ರ|| ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ
ಪಟ್ಟಾಧ್ಯಕ್ಷರು, ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠ, ಬೆಂಗಳೂರು–37
ಅವರ 24ನೇ ವರ್ಷದ ಪಾವನ ಕಾರ್ಯಕ್ರಮ ಲೋಕಕಲ್ಯಾಣಾರ್ಥವಾಗಿ ಪರಾಭವ ನಾಮ ಸಂವತ್ಸರದ ಪವಿತ್ರ ಶ್ರಾವಣ ಮಾಸದ ಅಂಗವಾಗಿ, ಮನೆ – ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ – ವಚನ ಪ್ರವಚನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ.
ಈ ಪವಿತ್ರ ಕಾರ್ಯಕ್ರಮದ ಮೂಲಕ ಪ್ರತಿಯೊಂದು ಮನೆಯಲ್ಲಿ ಶಿವಪೂಜೆಯ ಸಂಸ್ಕಾರವನ್ನು ಬೆಳೆಸುವುದು, ಶಿವಾನುಭವದ ಮೂಲಕ ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆ ನೀಡುವುದು ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿಯ ಅಮೂಲ್ಯ ತತ್ತ್ವಜ್ಞಾನವನ್ನು ಜನಮಾನಸಕ್ಕೆ ತಲುಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದ : 13-08-2026 ರಿಂದ 10-09-2026 ರವರೆಗೆ
ಈ ಪಾವನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು, ಶಿವಶರಣರು ಹಾಗೂ ಸರ್ವ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಿವಕೃಪೆಗೆ ಪಾತ್ರರಾಗಬೇಕೆಂದು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
ಸರ್ವರಿಗೂ ಆದರದ ಸ್ವಾಗತ
ಓಂ ನಮಃ ಶಿವಾಯ




