Grand Felicitation Ceremony to Welcome His Holiness After the Sacred Kailas–Manasarovar Yatra

A grand felicitation ceremony was organised to welcome His Holiness on His first visit to Mangooli after the successful and safe completion of the sacred Kailas–Manasarovar Yatra.

The programme was graced by eminent personalities of the village, including Shri Appugouda Patil and Shri Chandrashekhargouda Patil, who paid rich tributes to His Holiness and spoke with deep reverence about the spiritual significance of the holy pilgrimage. Their heartfelt addresses reflected the profound respect and admiration inspired by His Holiness’ sacred journey.

On the occasion, His Holiness shared a brief account of the divine experiences, spiritual reflections, and memorable moments from the Kailas–Manasarovar Yatra, inspiring the devotees with His blessings and insights.

The ceremony concluded with a heartfelt felicitation by devoted disciples and admirers from Mangooli, Ingaleshwar, Vadavadagi, Sankanal, Vijayapura, Savanahalli, Malaghan, and several other places, who offered their respects with great devotion and gratitude. The gathering stood as a memorable celebration of faith, reverence, and the enduring spiritual bond between His Holiness and His devotees.

ಪರಮಪೂಜ್ಯರವರು ಪವಿತ್ರ ಕೈಲಾಸ–ಮಾನಸ ಸರೋವರ ಯಾತ್ರೆಯನ್ನು ಯಶಸ್ವಿಯಾಗಿ ಹಾಗೂ ಸುರಕ್ಷಿತವಾಗಿ ಪೂರ್ಣಗೊಳಿಸಿ, ಪ್ರಥಮ ಬಾರಿಗೆ ಮನಗೂಳಿಗೆ ದಯಮಾಡಿಸಿದ ಸಂದರ್ಭದಲ್ಲಿ ಭಕ್ತರು ಹಾಗೂ ಗ್ರಾಮಸ್ಥರ ವತಿಯಿಂದ ಭವ್ಯ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಶ್ರೀ ಅಪ್ಪುಗೌಡ ಪಾಟೀಲ, ಶ್ರೀ ಚಂದ್ರಶೇಖರಗೌಡ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಪೂಜ್ಯರ ಆಧ್ಯಾತ್ಮಿಕ ಸಾಧನೆ, ಧಾರ್ಮಿಕ ಸೇವೆ ಹಾಗೂ ಕೈಲಾಸ ಯಾತ್ರೆಯ ಮಹತ್ವವನ್ನು ಸ್ಮರಿಸಿ ಅಭಿನಂದನಾ ನುಡಿಗಳನ್ನು ಅರ್ಪಿಸಿದರು.

ನಂತರ ಪರಮಪೂಜ್ಯರು ಕೈಲಾಸ–ಮಾನಸ ಸರೋವರ ಯಾತ್ರೆಯ ಆಧ್ಯಾತ್ಮಿಕ ಅನುಭವಗಳು, ದೈವಾನುಭೂತಿ ಹಾಗೂ ಯಾತ್ರೆಯ ವಿಶೇಷ ಕ್ಷಣಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಂಡು, ಭಕ್ತರಿಗೆ ಆಶೀರ್ವಚನಗಳನ್ನು ನೀಡಿದರು.

ಅನಂತರ ಮನಗೂಳಿ, ಇಂಗಳೇಶ್ವರ, ವಡವಡಗಿ, ಸಂಕನಾಳ, ವಿಜಯಪುರ, ಸವನಹಳ್ಳಿ, ಮಲಘಾಣ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಸದ್ಭಕ್ತರು ಹಾಗೂ ಅಭಿಮಾನಿಗಳು ಪರಮಪೂಜ್ಯರನ್ನು ಭಕ್ತಿಭಾವದಿಂದ ಸನ್ಮಾನಿಸಿ, ತಮ್ಮ ಗೌರವ ಮತ್ತು ಭಕ್ತಿಯನ್ನು ಸಮರ್ಪಿಸಿದರು.

ಈ ಅಭಿನಂದನಾ ಸಮಾರಂಭವು ಭಕ್ತಿ, ಗೌರವ ಹಾಗೂ ಆಧ್ಯಾತ್ಮಿಕ ಸಂಭ್ರಮದಿಂದ ಕೂಡಿದ ಸ್ಮರಣೀಯ ಕ್ಷಣವಾಗಿ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು.

Morning Prayer at SVS Free Residential School

Every morning at SVS Free Residential School, students begin their day with a serene and disciplined prayer assembly. The morning prayer instills values of gratitude, devotion, discipline, and unity, creating a positive and inspiring atmosphere for learning.

The assembly includes devotional prayers, meditation, moral thoughts, and inspirational messages that help students develop inner strength, self-confidence, and a sense of responsibility. This daily practice nurtures spiritual awareness while fostering respect, compassion, and a strong moral foundation.

Rooted in the rich traditions and values of the institution, the morning prayer prepares students to face each day with focus, enthusiasm, and a commitment to excellence in both academics and character.

ಪವಿತ್ರ ಕೈಲಾಸ ಪರಿಕ್ರಮೆ ಯಶಸ್ವಿಯಾಗಿ ಸಂಪನ್ನ

ಶಿವ ಮಹಾದೇವರ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯವರ ಹಾಗೂ ಪರಮಪೂಜ್ಯ ಶ್ರೀಶೈಲ ಜಗದ್ಗುರು ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಕೃಪಾಶೀರ್ವಾದದಿಂದ ಇಂದು ಮೂರು ದಿನಗಳ ಪವಿತ್ರ ಕೈಲಾಸ ಪರಿಕ್ರಮೆಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸುವ ಸೌಭಾಗ್ಯ ದೊರೆಯಿತು.

ಈ ಪವಿತ್ರ, ಅವಿಸ್ಮರಣೀಯ ಹಾಗೂ ಆಧ್ಯಾತ್ಮಿಕ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅನುಗ್ರಹಿಸಿದ ಪರಮಶಿವನಿಗೂ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಯವರಿಗೂ, ಪರಮಪೂಜ್ಯ ಶ್ರೀಶೈಲ ಜಗದ್ಗುರುಗಳವರಿಗೂ ಹಾಗೂ ಆರಾಧ್ಯ ಗುರುಗಳಾದ ಮನಗೂಳಿ ಮತ್ತು ಬೆಂಗಳೂರಿನ ಲಿಂಗೈಕ್ಯ ಉಭಯ ಗುರುಗಳವರ ಪಾದಕಮಲಗಳಿಗೆ ನಮ್ಮ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಮರ್ಪಿಸುತ್ತೇವೆ.

ಈ ದಿವ್ಯ ಯಾತ್ರೆಯ ಪ್ರತಿಯೊಂದು ಹೆಜ್ಜೆಯೂ ಭಕ್ತಿ, ತಪಸ್ಸು, ಆತ್ಮಶುದ್ಧಿ ಹಾಗೂ ಪರಮಾತ್ಮನ ಅನುಗ್ರಹದ ಅನುಭೂತಿಯನ್ನು ನೀಡಿದ್ದು, ಜೀವನದ ಅತ್ಯಂತ ಅಮೂಲ್ಯ ಹಾಗೂ ಚಿರಸ್ಮರಣೀಯ ಆಧ್ಯಾತ್ಮಿಕ ಅನುಭವವಾಗಿ ಸದಾ ಹೃದಯದಲ್ಲಿ ಉಳಿಯಲಿದೆ.

A Sacred Pilgrimage to Manasarovar & Mount Kailash

These are cherished and unforgettable moments from performing Ishtalinga Puja on the sacred shores of Lake Manasarovar, in the divine presence of His Holiness the Shreeshail Jagadguru, while beholding the holy southern face of Mount Kailash during the auspicious Godhuli Muhurta.

This sacred occasion was a profound experience of devotion, spiritual grace, and divine blessings. Amid the serene and spiritually charged atmosphere of these holy lands, I offered heartfelt prayers for the peace, prosperity, good health, and well-being of all devotees, their families, and humanity at large.

May the divine blessings of Lord Shiva and the grace of His Holiness be with you and your family always, guiding you with peace, happiness, and spiritual fulfillment.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂಭ್ರಮ

ಶ್ರೀಮಠದ ವಿಭೂತಿಯೋಗ ಕೇಂದ್ರದ ಯೋಗಾಚಾರ್ಯರಾದ ಶ್ರೀ ಶ್ರೀನಿವಾಸಮೂರ್ತಿಯವರ ನೇತೃತ್ವದಲ್ಲಿ, ಶ್ರೀಮಠದ ಉಚಿತ ವಸತಿ ಶಾಲೆಯ ವಿದ್ಯಾರ್ಥಿಗಳು, ಶ್ರೀಮಠದ ವ್ಯಾಪ್ತಿಯ ಪ್ರಜಾಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸ ಮಾಡುವುದರ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು ಸಂಭ್ರಮದಿಂದ ಆಚರಿಸಿದರು.

ಇದೇ ಸಂದರ್ಭದಲ್ಲಿ, ಕೈಲಾಸ-ಮಾನಸ ಸರೋವರ ಯಾತ್ರೆಯಲ್ಲಿರುವ ಪರಮಪೂಜ್ಯ ಶ್ರೀ ಸ್ವಾಮೀಜಿಯವರು, ನೇಪಾಳದ ರಾಜಧಾನಿ ಕಾಠ್ಮಂಡುವಿನ ಭಕ್ತಪುರದಲ್ಲಿರುವ ಶ್ರೀ ಕೇದಾರನಾಥನ ಶಿರವೆಂದು ಪ್ರಸಿದ್ಧವಾದ ಶ್ರೀ ಡೋಲೇಶ್ವರ ಮಹಾದೇವ ದೇವಾಲಯದ ಪವಿತ್ರ ಪರಿಸರದಲ್ಲಿ ಪ್ರಾಣಾಯಾಮ ಹಾಗೂ ಧ್ಯಾನಾಭ್ಯಾಸ ಮಾಡುವುದರ ಮೂಲಕ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀಮಠದ ಉಚಿತ ವಸತಿ ಶಾಲೆಯ ವಿದ್ಯಾರ್ಥಿಗಳು, ಯೋಗಾಚಾರ್ಯ ಶ್ರೀ ಶ್ರೀನಿವಾಸಮೂರ್ತಿಯವರ ನೇತೃತ್ವದಲ್ಲಿ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನಾಭ್ಯಾಸಗಳನ್ನು ನಡೆಸಿ ಯೋಗದ ಮಹತ್ವವನ್ನು ಅರಿತುಕೊಂಡರು.

ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯದ ಸಮನ್ವಯಕ್ಕೆ ದಾರಿಯೆಂಬ ಸಂದೇಶವನ್ನು ಈ ವಿಶೇಷ ಆಚರಣೆ ಸಾರಿತು. ಯೋಗಾಭ್ಯಾಸದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಎಲ್ಲರಿಗೂ ಕರೆ ನೀಡಲಾಯಿತು.

“Guru Raksha” to CM by Akhila Bharata Veerashaiva Shivacharya Sangha

“Guru Raksha” to CM by Akhila Bharata Veerashaiva Shivacharya Sangha

I had the privilege of participating in a programme organized by the Akhila Bharata Veerashaiva Shivacharya Sangha, during which the “Guru Raksha” was presented to the newly appointed Chief Minister and the devoted disciple of His Holiness Srimad Rambhapuri Jagadguru Veeragangadhara Bhagavatpadaru, the esteemed D. K. Shivakumar, at his residence.

ನೂತನ ಮುಖ್ಯಮಂತ್ರಿಗಳಾದ ಮತ್ತು ಶ್ರೀಮದ್ ರಂಭಾಪುರೀ ಜಗದ್ಗುರು ವೀರಗಂಗಾಧರ ಭಗವತ್ಪಾದರ ಪರಮ ಭಕ್ತರಾದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ ಮನೆಗೆ ಹೋಗಿ ಅವರಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ‘ಗುರು ರಕ್ಷೆ’ಯನ್ನು ನೀಡಿದ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.