ಅಯೋಧ್ಯೆಯಲ್ಲಿ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ವತಿಯಿಂದ ಯಾತ್ರಾ ನಿವಾಸ ಮತ್ತು ಉಚಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಖರೀದಿಸಿರುವ ನಿವೇಶನಗಳಿಗೆ ಇಂದು ಶ್ರೀ ಕಾಶೀ ಜಗದ್ಗುರು ಮಹಾಸನ್ನಿಧಿಯವರು ಪಾದಾರ್ಪಣೆ ಮಾಡಿ, ಪವಿತ್ರ ಆಶೀರ್ವಾದವನ್ನು ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಗೋಪಾಲ ಜೀ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾದರು.
ಧಾರ್ಮಿಕ ಸೇವೆ, ಶಿಕ್ಷಣ ಹಾಗೂ ಸಮಾಜಕಲ್ಯಾಣದ ಮಹೋನ್ನತ ಉದ್ದೇಶದಿಂದ ಕೈಗೊಂಡಿರುವ ಈ ಯೋಜನೆಗಳು ಶ್ರೀ ಜಗದ್ಗುರುಗಳ ಆಶೀರ್ವಾದದಿಂದ ಯಶಸ್ವಿಯಾಗಿ ಸಾಕಾರಗೊಳ್ಳಲಿ