ಅಯೋಧ್ಯೆಯಲ್ಲಿ ಯಾತ್ರಾ ನಿವಾಸ ಹಾಗೂ ಉಚಿತ ವಿದ್ಯಾರ್ಥಿ ನಿಲಯ ನಿರ್ಮಾಣದ ನಿವೇಶನಗಳಿಗೆ ಶ್ರೀ ಕಾಶೀ ಜಗದ್ಗುರು ಮಹಾಸ್ವಾಮಿಗಳವರ ಪಾದಸ್ಪರ್ಶ ಹಾಗೂ ಆಶೀರ್ವಾದ

ಅಯೋಧ್ಯೆಯಲ್ಲಿ  ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ವತಿಯಿಂದ ಯಾತ್ರಾ ನಿವಾಸ ಮತ್ತು ಉಚಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಖರೀದಿಸಿರುವ ನಿವೇಶನಗಳಿಗೆ ಇಂದು ಶ್ರೀ ಕಾಶೀ ಜಗದ್ಗುರು ಮಹಾಸನ್ನಿಧಿಯವರು ಪಾದಾರ್ಪಣೆ ಮಾಡಿ, ಪವಿತ್ರ ಆಶೀರ್ವಾದವನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಗೋಪಾಲ ಜೀ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾದರು.

ಧಾರ್ಮಿಕ ಸೇವೆ, ಶಿಕ್ಷಣ ಹಾಗೂ ಸಮಾಜಕಲ್ಯಾಣದ ಮಹೋನ್ನತ ಉದ್ದೇಶದಿಂದ ಕೈಗೊಂಡಿರುವ ಈ ಯೋಜನೆಗಳು ಶ್ರೀ ಜಗದ್ಗುರುಗಳ ಆಶೀರ್ವಾದದಿಂದ ಯಶಸ್ವಿಯಾಗಿ ಸಾಕಾರಗೊಳ್ಳಲಿ

Leave a Comment