ಮನೆ–ಮನಗಳಲ್ಲಿ ಶಿವಪೂಜೆ ಶಿವಾನುಭವ – 18ನೇ ದಿನದ ಕಾರ್ಯಕ್ರಮ

2026ರ ಆಗಸ್ಟ್ 30ರಂದು, ಶ್ರಾವಣ ಮಾಸದ 24ನೇ ವರ್ಷದ 18ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಕಸ್ತೂರಿನಗರದಲ್ಲಿ ಶ್ರೀ ವಿನೋದ ಇಂಡಿ ಹಾಗೂ ಬಸವ ಪಥ ಫೌಂಡೇಷನ್ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.

ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.

ಓಂ ನಮಃ ಶಿವಾಯ 

Leave a Comment