ಮೈಸೂರು ದಸರಾ ಉತ್ಸವಕ್ಕೆ ವಿಭೂತಿಪುರ ಮಠದ ಶ್ರೀಗಳಿಗೆ ಗೌರವಪೂರ್ವಕ ಆಹ್ವಾನ

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ, ಬೆಂಗಳೂರಿನ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ ಪರಮಪೂಜ್ಯ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಮುಖ್ಯಮಂತ್ರಿಗಳ ನಿರ್ದೇಶನದಂತೆ ಮೈಸೂರು ದಸರಾ ಉತ್ಸವ ಸಮಿತಿಯ ವತಿಯಿಂದ ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಗಳಿಗೆ ದಸರಾ ಉತ್ಸವದ ಅಧಿಕೃತ ಆಹ್ವಾನವನ್ನು ಸಲ್ಲಿಸಿ, ಉತ್ಸವದಲ್ಲಿ ಭಾಗವಹಿಸುವಂತೆ ವಿನಂತಿಸಲಾಯಿತು.

ನಾಡಿನ ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವದ ಪ್ರತೀಕವಾದ ಮೈಸೂರು ದಸರಾ ಉತ್ಸವಕ್ಕೆ ಶ್ರೀಗಳವರನ್ನು ಆಹ್ವಾನಿಸಿರುವುದು ವಿಶೇಷ ಗೌರವದ ಸಂಗತಿಯಾಗಿದೆ.

Leave a Comment