2026ರ ಆಗಸ್ಟ್ 26ರಂದು, ಶ್ರಾವಣ ಮಾಸದ 24ನೇ ವರ್ಷದ 14ನೇ ದಿನದಂದು, ‘ಮನೆ–ಮನಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ–ವಚನ ಪ್ರವಚನ’ ಕಾರ್ಯಕ್ರಮವು ಸೀಗೆಹಳ್ಳಿ, ಕೆ.ಆರ್. ಪುರಂನಲ್ಲಿ ಶ್ರೀಮತಿ ಸುವರ್ಣಾ ಹಾಗೂ ಶ್ರೀ ವೀರಭದ್ರ (ಡಿಆರ್ಡಿಒ ವಿಜ್ಞಾನಿ) ಅವರ ಕುಟುಂಬದವರಿಂದ ಭಕ್ತಿ–ಶ್ರದ್ಧೆಗಳಿಂದ ನೆರವೇರಿತು.
ಕುಟುಂಬದವರು ಇಷ್ಟಲಿಂಗ ಪೂಜೆ ಹಾಗೂ ಶಿವಾರಾಧನೆ ನೆರವೇರಿಸಿ, ಲೋಕಕಲ್ಯಾಣ ಹಾಗೂ ಸರ್ವರ ಸುಖ–ಶಾಂತಿಗಾಗಿ ಪ್ರಾರ್ಥಿಸಿದರು.
ಓಂ ನಮಃ ಶಿವಾಯ 🙏






